ಸೋಮವಾರ, ಏಪ್ರಿಲ್ 6, 2015

ಮಳೆ ಹನಿ

ಜೋರು ಮಳೆಯಲಿ
ಅಳತೆ ಸಿಗದ ಬಯಲಲಿ
ನಿಂತಿರುವೆ ನಾನು
ದೇಹದ ಮೇಲೆ ಬೀಳುತ್ತಿರುವ
ಪ್ರತಿ ಹನಿಯಲ್ಲು ಸಾಗರದಷ್ಟು
ನೋವಿದೆ...!

ಮಳೆ ನಿಂತ ಮೇಲೆ ತಿಳಿದಿದ್ದು
ಆ ಹನಿಗಳು ನನ್ನ ಕಣ್ಣೀರಿನ
ಹನಿಗಳನ್ನು ಒರೆಸುತ್ತಿದ್ದವು ಎಂದು
ಆ ಮುಗಿಲಿಗೂ ನನ್ನಷ್ಟೇ ನೋವಿತ್ತೆಂದು..!!




ಗೂಳೂರು ಚಂದ್ರು

ಸೋಮವಾರ, ಮಾರ್ಚ್ 16, 2015

ವೋರೆಗಣ್ಣು

ಆ ವೋರೆಗಣ್ಣಿನ ನೋಟದಲ್ಲಿ ನನ್ನ ಮೇಲೆ
ನೀನಿಟ್ಟಿರುವ ಪ್ರೀತಿ ಅಡಗಿದೆ ಎಂದು
ನನಗೆ ತಿಳಿದಿಹುದು ಗೆಳತಿ...!
ನೀನು ಮಳ್ಳೀ ನಿನ್ನ ಮುಖಭಾವದಲ್ಲಿ
ಯಾರು ಏನನ್ನು ಗುರುತಿಸಲಾರರು
ಎಂದು ನೀ ತಿಳಿದಿರುವೆ ನೀ ನನ್ನ ಹೃದಯಲ್ಲಿ ಅಡಗಿರುವೆ
ನನ್ನ ಹೃದಯದ ಕಳವಳ, ಗೊಂದಲ ನನಗೆ ತಿಳಿಯದೇ....!!




ಗೂಳೂರು ಚಂದ್ರು

ಗುರುವಾರ, ಮಾರ್ಚ್ 12, 2015

ಕತ್ತಲೆ

ಕತ್ತಲೆಯ ಮನೆಯಲ್ಲಿ ಮರುಗುತಿಹುದು ಒಬ್ಬಂಟಿ ಮನಸ್ಸು....!
ಕಡುಗತ್ತಲ ರಾತ್ರಿಯಲಿ ಕೇಳುತ್ತಿರುವೇನು ನನ್ನ ಕಥೆಯನ್ನೇ....!!
ಕಣ್ಣಲ್ಲಿದ್ದ ನೀರು ಖಾಲಿಯಾದ ಮೇಲೆ ತಿಳಿಯಿತು ನಾ ಕೇಳುತ್ತಿರುವುದು ನನ್ನ ಕಥೆಯನ್ನೇ ಎಂದು..



ಗೂಳೂರು ಚಂದ್ರು

ನಿನ್ನ ಹೆಸರು

ಹೃದಯದ ಮಂಟಪದಲಿ ಗುನುಗುತಿಹುದು ನಿನ್ನ ಹೆಸರು...!
ದೇಹದ ಹನಿ ಹನಿ ರಕ್ತದಲ್ಲೂ ನೀ ಬೆರೆತಿರುವೆ...!!



ಗೂಳೂರು ಚಂದ್ರು

ಶುಕ್ರವಾರ, ಫೆಬ್ರವರಿ 13, 2015

ನಿನ್ನದೇ ಹಂಬಲ

ನೀನೇ  ನನಗೆ ಪ್ರಶ್ನೆಯಾಗಿದ್ದೆ...!
ನಿನ್ನ ನಗು ನನಗೆ ಉತ್ತರ ವಾಯಿತು ...!!
ಇರುಳಲ್ಲಿ ನೀನು ನನಗೆ ಕನಸಾಗಿದ್ದೆ...!
ಹಗಲಿನಲ್ಲಿ ನಿನ್ನ ಕಂಡು ಕನಸು ನನಸಾಯಿತು....!!


ಗೂಳೂರು ಚಂದ್ರು

ಗುರುವಾರ, ಫೆಬ್ರವರಿ 12, 2015

ಮೌನ

ನಿನ್ನ ಮೌನ ನೋಡಿ
ನನ್ನ ಹೃದಯದಲ್ಲಿ ಮೌನರಾಗ ಮಿಡಿಯುತ್ತಿದೆ.... ನಿನಗೆ ಒಲಿದಿರುವ ಮೌನವ ನನಗೂ ಕಲಿಸಿಕೊಡು ಗೆಳತಿ ....
ಜೀವಮಾನವೆಲ್ಲ ನಿನ್ನ ಮೌನವೇ ನನ್ನ ಹೃದಯದಲ್ಲಿ ಉಳಿದುಬಿಡಬಹುದು....
ನಿನ್ನ ತುಟಿಯ ಬಿಚ್ಚಿ ನನ್ನ ಹೆಸರಾನದರೂ ಕರೆಯಬಾರದೆ ಗೆಳತಿ ....
ನಿನ್ನ ಒಂದು ಮಾತಿಗೆ ನನ್ನ ಆಯಸ್ಸು ಇರುವವರೆಗೂ ಬೇಕಾದರೂ ನಾ ಕಾಯುವೆ.....!!! 


ಗೂಳೂರು ಚಂದ್ರು

ಗುರುವಾರ, ಮೇ 15, 2014

ಆಸೆ

ಆನಂದವೋ.....
ಹೃದಯದೊಳಗೆ ಆರಂಭವೋ.... ಸಾವಿರ ವೀಣೆಗಳು ಒಂದೇ ಬಾರಿ ನುಡಿಸಿದಂತಾಗಿದೆ ಎದೆಯಲ್ಲಿ ..
ಏನೋ ಒಂದು ಆಸೆ ....
ನಿನ್ನ ನೊಡೋ ಸಣ್ಣ ಆಸೆ .....
ನಿನ್ನ ಕಣ್ಣ ನೋಟ ನನ್ನ ಹೃದಯಕ್ಕೆ ಮೀಟಿದೆ...!!

ಗೂಳೂರು ಚಂದ್ರು