ಶುಕ್ರವಾರ, ಫೆಬ್ರವರಿ 13, 2015

ನಿನ್ನದೇ ಹಂಬಲ

ನೀನೇ  ನನಗೆ ಪ್ರಶ್ನೆಯಾಗಿದ್ದೆ...!
ನಿನ್ನ ನಗು ನನಗೆ ಉತ್ತರ ವಾಯಿತು ...!!
ಇರುಳಲ್ಲಿ ನೀನು ನನಗೆ ಕನಸಾಗಿದ್ದೆ...!
ಹಗಲಿನಲ್ಲಿ ನಿನ್ನ ಕಂಡು ಕನಸು ನನಸಾಯಿತು....!!


ಗೂಳೂರು ಚಂದ್ರು

ಗುರುವಾರ, ಫೆಬ್ರವರಿ 12, 2015

ಮೌನ

ನಿನ್ನ ಮೌನ ನೋಡಿ
ನನ್ನ ಹೃದಯದಲ್ಲಿ ಮೌನರಾಗ ಮಿಡಿಯುತ್ತಿದೆ.... ನಿನಗೆ ಒಲಿದಿರುವ ಮೌನವ ನನಗೂ ಕಲಿಸಿಕೊಡು ಗೆಳತಿ ....
ಜೀವಮಾನವೆಲ್ಲ ನಿನ್ನ ಮೌನವೇ ನನ್ನ ಹೃದಯದಲ್ಲಿ ಉಳಿದುಬಿಡಬಹುದು....
ನಿನ್ನ ತುಟಿಯ ಬಿಚ್ಚಿ ನನ್ನ ಹೆಸರಾನದರೂ ಕರೆಯಬಾರದೆ ಗೆಳತಿ ....
ನಿನ್ನ ಒಂದು ಮಾತಿಗೆ ನನ್ನ ಆಯಸ್ಸು ಇರುವವರೆಗೂ ಬೇಕಾದರೂ ನಾ ಕಾಯುವೆ.....!!! 


ಗೂಳೂರು ಚಂದ್ರು

ಗುರುವಾರ, ಮೇ 15, 2014

ಆಸೆ

ಆನಂದವೋ.....
ಹೃದಯದೊಳಗೆ ಆರಂಭವೋ.... ಸಾವಿರ ವೀಣೆಗಳು ಒಂದೇ ಬಾರಿ ನುಡಿಸಿದಂತಾಗಿದೆ ಎದೆಯಲ್ಲಿ ..
ಏನೋ ಒಂದು ಆಸೆ ....
ನಿನ್ನ ನೊಡೋ ಸಣ್ಣ ಆಸೆ .....
ನಿನ್ನ ಕಣ್ಣ ನೋಟ ನನ್ನ ಹೃದಯಕ್ಕೆ ಮೀಟಿದೆ...!!

ಗೂಳೂರು ಚಂದ್ರು

ಭಾನುವಾರ, ಮೇ 4, 2014

ನಾಯಕ ನಾನಲ್ಲ

ಕಥೆಯಾ ನಾಯಕ ನಾನಲ್ಲ..
ನೀನು ಕೂಡ ಕಥೆಯಾ ನಾಯಕಿಯಲ್ಲ...
ಕಥೆಯ ಮಧ್ಯದಲ್ಲಿ ಬಂದು ಅಲ್ಲೆಲ್ಲೊ ಕೊನೆಯಲ್ಲಿ, ಕೊನೆಗೊಳ್ಳುವ ಪ್ರೇಮಕಥೆ ನಮ್ಮದು
ನಮ್ಮನ್ನು ಯಾರು ಓದಲಿಲ್ಲ,ನೋಡಲಿಲ್ಲ
ಕಥೆಯಲ್ಲಿ ಬರುವ ಹತ್ತಾರು ಪಾತ್ರಗಳಲ್ಲಿ ಯಾರು ಕನಿಷ್ಠ ನಮ್ಮ ಹೆಸರುಗಳನ್ನುನೆನಪಿಟ್ಟುಕೊಳ್ಳುವುದಿಲ್ಲ...
ಅಂತಹ ಪಾತ್ರ ನಮ್ಮದು
ಕಥೆಯಲ್ಲಿ ಬರುವ ನಾಯಕ, ನಾಯಕಿಯರ ಪ್ರೀತಿಯು ಕೂಡ ತಲೆ ಬಗ್ಗಿಸುತ್ತಿತ್ತು..ನಮ್ಮ ಪ್ರೀತಿಯನೋಡಿ....ಕಥೆಯನ್ನು ಬರೆದಿರುವ ಬರಹಗಾರ ನಾಯಕ ನಾಯಕಿಯರ ಪ್ರೀತಿಯನ್ನು ಪರಿಶುದ್ಧ, ಪರಿಶುದ್ಧ ಎಂದು ಸಾರಿ ಸಾರಿ ಬರೆದಿದ್ದ...
ಅವರ ಪ್ರೀತಿ ಪರಿಶುದ್ದವೊ,ಅಲ್ಲವೋ ಗೊತ್ತಿಲ್ಲ.  ನಮ್ಮ ಪ್ರೀತಿ ಮಾತ್ರ ಜಗತ್ತಿನ ಎಲ್ಲಾ ಪ್ರೇಮಿಗಳ ಪ್ರೀತಿಗಿಂತ ಪರಿಶುದ್ದವಾಗಿತ್ತು....

ಗೂಳೂರು ಚಂದ್ರು

ಮಂಗಳವಾರ, ಏಪ್ರಿಲ್ 22, 2014

ತಣ್ಣನೆಯ ಮನಸ್ಸು

ಬಿಸಿಯ ಬೇಸಿಗೆಯಲ್ಲೂ  ಮನಸ್ಸು ತಣ್ಣಗೆ ಕೊರೆತಿಯುತಿಹುದು
ಬೆಚ್ಚನೆಯ ನಿನ್ನ ಮನಸ್ಸಿನ ಅರಮನೆಯಲ್ಲಿ ತುಸು ಜಾಗ ಕೊಡು ಗೆಳತಿ ....
ನಿನ್ನ ಮನಸ್ಸಿಗೆ ಬರಲು ನನ್ನ ಮನಸ್ಸು ಕಾತೊರೆಯುತ್ತಿಹುದು ...
ಜಾಗ ಕೊಡು ಗೆಳತಿ ನಿನ್ನ ಮನಸ್ಸಿನಲ್ಲಿ ಜಾಗ ಕೊಡು....

ಗೂಳೂರು ಚಂದ್ರು

ಭಾನುವಾರ, ಏಪ್ರಿಲ್ 20, 2014

ಮಳೆ ಹನಿ

ಬೇಸಿಗೆಯ ಬಿಸಿಲು....
ಆ ಬಿಸಿಲಿನ ಉಷ್ಣಾಂಶಕ್ಕೆ ಬಳಲಿ ಬೆಂಡಾಗಿ .... ಮುದುಡಿರುವ ಕಣ್ಣುಗಳು ...
ಆ ಕಣ್ಣುಗಳಿಗೆ ಬಿದ್ದ ತಣ್ಣನೆಯ ಮಳೆ ಹನಿಯು ನೀನು ...


ಗೂಳೂರು ಚಂದ್ರು

ಭಾನುವಾರ, ಮಾರ್ಚ್ 9, 2014

ನೆನಪು

ಮರೆತರು ಮರೆಯಲಾಗದ ...!!
ಬಿಟ್ಟರು ಬಿಡಲಾಗದ ...!!!
ನೆನೆಯದಿದ್ದರೂ  ನೆನಪಾಗುವ ...!
ದ್ರವ್ಯ ನೀನು....!  ನನ್ನ ಬಾಳಿನ ಕಾವ್ಯ ನೀನು.....!!!!

ಗೂಳೂರು  ಚಂದ್ರು