ಭಾನುವಾರ, ಮೇ 4, 2014

ನಾಯಕ ನಾನಲ್ಲ

ಕಥೆಯಾ ನಾಯಕ ನಾನಲ್ಲ..
ನೀನು ಕೂಡ ಕಥೆಯಾ ನಾಯಕಿಯಲ್ಲ...
ಕಥೆಯ ಮಧ್ಯದಲ್ಲಿ ಬಂದು ಅಲ್ಲೆಲ್ಲೊ ಕೊನೆಯಲ್ಲಿ, ಕೊನೆಗೊಳ್ಳುವ ಪ್ರೇಮಕಥೆ ನಮ್ಮದು
ನಮ್ಮನ್ನು ಯಾರು ಓದಲಿಲ್ಲ,ನೋಡಲಿಲ್ಲ
ಕಥೆಯಲ್ಲಿ ಬರುವ ಹತ್ತಾರು ಪಾತ್ರಗಳಲ್ಲಿ ಯಾರು ಕನಿಷ್ಠ ನಮ್ಮ ಹೆಸರುಗಳನ್ನುನೆನಪಿಟ್ಟುಕೊಳ್ಳುವುದಿಲ್ಲ...
ಅಂತಹ ಪಾತ್ರ ನಮ್ಮದು
ಕಥೆಯಲ್ಲಿ ಬರುವ ನಾಯಕ, ನಾಯಕಿಯರ ಪ್ರೀತಿಯು ಕೂಡ ತಲೆ ಬಗ್ಗಿಸುತ್ತಿತ್ತು..ನಮ್ಮ ಪ್ರೀತಿಯನೋಡಿ....ಕಥೆಯನ್ನು ಬರೆದಿರುವ ಬರಹಗಾರ ನಾಯಕ ನಾಯಕಿಯರ ಪ್ರೀತಿಯನ್ನು ಪರಿಶುದ್ಧ, ಪರಿಶುದ್ಧ ಎಂದು ಸಾರಿ ಸಾರಿ ಬರೆದಿದ್ದ...
ಅವರ ಪ್ರೀತಿ ಪರಿಶುದ್ದವೊ,ಅಲ್ಲವೋ ಗೊತ್ತಿಲ್ಲ.  ನಮ್ಮ ಪ್ರೀತಿ ಮಾತ್ರ ಜಗತ್ತಿನ ಎಲ್ಲಾ ಪ್ರೇಮಿಗಳ ಪ್ರೀತಿಗಿಂತ ಪರಿಶುದ್ದವಾಗಿತ್ತು....

ಗೂಳೂರು ಚಂದ್ರು

ಮಂಗಳವಾರ, ಏಪ್ರಿಲ್ 22, 2014

ತಣ್ಣನೆಯ ಮನಸ್ಸು

ಬಿಸಿಯ ಬೇಸಿಗೆಯಲ್ಲೂ  ಮನಸ್ಸು ತಣ್ಣಗೆ ಕೊರೆತಿಯುತಿಹುದು
ಬೆಚ್ಚನೆಯ ನಿನ್ನ ಮನಸ್ಸಿನ ಅರಮನೆಯಲ್ಲಿ ತುಸು ಜಾಗ ಕೊಡು ಗೆಳತಿ ....
ನಿನ್ನ ಮನಸ್ಸಿಗೆ ಬರಲು ನನ್ನ ಮನಸ್ಸು ಕಾತೊರೆಯುತ್ತಿಹುದು ...
ಜಾಗ ಕೊಡು ಗೆಳತಿ ನಿನ್ನ ಮನಸ್ಸಿನಲ್ಲಿ ಜಾಗ ಕೊಡು....

ಗೂಳೂರು ಚಂದ್ರು

ಭಾನುವಾರ, ಏಪ್ರಿಲ್ 20, 2014

ಮಳೆ ಹನಿ

ಬೇಸಿಗೆಯ ಬಿಸಿಲು....
ಆ ಬಿಸಿಲಿನ ಉಷ್ಣಾಂಶಕ್ಕೆ ಬಳಲಿ ಬೆಂಡಾಗಿ .... ಮುದುಡಿರುವ ಕಣ್ಣುಗಳು ...
ಆ ಕಣ್ಣುಗಳಿಗೆ ಬಿದ್ದ ತಣ್ಣನೆಯ ಮಳೆ ಹನಿಯು ನೀನು ...


ಗೂಳೂರು ಚಂದ್ರು

ಭಾನುವಾರ, ಮಾರ್ಚ್ 9, 2014

ನೆನಪು

ಮರೆತರು ಮರೆಯಲಾಗದ ...!!
ಬಿಟ್ಟರು ಬಿಡಲಾಗದ ...!!!
ನೆನೆಯದಿದ್ದರೂ  ನೆನಪಾಗುವ ...!
ದ್ರವ್ಯ ನೀನು....!  ನನ್ನ ಬಾಳಿನ ಕಾವ್ಯ ನೀನು.....!!!!

ಗೂಳೂರು  ಚಂದ್ರು

ಸೋಮವಾರ, ಫೆಬ್ರವರಿ 17, 2014

ಪ್ರೀತಿ ಎಂದರೇನು

ನಾ  ನೊಡದ  ನೀನ್ನನು...
ನೀ  ನೊಡದ  ನನ್ನನು...
ಅರಿಯುವದು  ಪ್ರೀತಿನಾ....??

ಒಬ್ಬರನೊಬ್ಬರು ಬಿಟ್ಟಿರದೇ ...
ಎದರು ಬದರು ಕುಳಿತುಕೊಂಡು
ಕಣ್ಣುಗಳನ್ನು  ನೋಡುವುದು  ಪ್ರೀತಿನಾ...???

ಇಬ್ಬರು  ಇನ್ನೊಬ್ಬರ  ಹಸರಲ್ಲಿ 
ಕವನ  ಕವಿತೆಗಳನ್ನ  ಬರಯುವುದು
ಪ್ರೀತಿನಾ...??

ಕನಸುಗಳ  ಕಣ್ಣಲ್ಲಿ  ಬಚ್ಚಿಟ್ಟು
ಮನಸು ಯಾವಗಲು  ಕಾಯುತ್ತಿರುವ  ಕಾತುರ  ಪ್ರೀತಿನಾ...??

ಪ್ರೀತಿ  ಎಂದರೇನು ....ಆರಿಯದೆ  ಹೋದೆ  ನಾನು....


ಗೂಳೂರು  ಚಂದ್ರು

ಶನಿವಾರ, ಫೆಬ್ರವರಿ 8, 2014

ಮನಸಿನ ಮಾತು

ನಿ ನನ್ನ ಹೃದಯದಲ್ಲಿ
ಬರೆದಾ ಸಾಲುಗಳು ಒಂದಾ ಎರಡಾ...!!
ನೀ ನನ್ನನು ನೋಡುತ್ತಿದ್ದರೆ ನೀನ್ನ
ನೋಟ ಅರ್ಜುನ ಬಿಟ್ಟ ಬಾಣದಂತೆ ನನ್ನ
ಹೃದಯದೊಳಗೆ ಹೊಕ್ಕುತಿತ್ತು ....!!
ನೀ ನನ್ನ ಹೃದಯದಲ್ಲಿ ಮಾತ್ರವಲ್ಲ
ನೀ ನನ್ನೊಳಗೆ ಸೇರಿರುವೆ....!!
ನನ್ನ ಪ್ರತಿ ನೋಟದೊಳಗೆ
ನೀ ಅವಿತಿರುವೆ
ನಿ ನನ್ನ ಪ್ರತಿ ಉಸಿರಿನಲಿ
ಬೆರೆತಿರುವೆ....!!!
ನಾ ಇಡುವ ಪ್ರತಿ ಹೆಜ್ಜೆಯಾ ಪಕ್ಕದಲಿ
ನೀನ್ನ ಹೆಜ್ಜೆಯಾ ನಾ ಕಾಣುವೆ....!!


ಗೂಳೂರು ಚಂದ್ರು