ಬುಧವಾರ, ಫೆಬ್ರವರಿ 5, 2014

ಸೆಲೆಯೋ ಪ್ರೀತಿಯಾ ಬಲೆಯೋ...??

ನಿ ನನ್ನ  ಹೃದಯದಲ್ಲಿ  ಬರೆದಾ  ಸಾಲುಗಳು  ಒಂದಾ  ಎರಡಾ...!!
ನೀ  ನನ್ನನು  ನೋಡುತ್ತಿದ್ದರೆ  ನೀನ್ನ  ನೋಟ ಅರ್ಜುನ ಬಿಟ್ಟ  ಬಾಣದಂತೆ  ನನ್ನ  ಹೃದಯದೊಳಗೆ  ಹೊಕ್ಕುತಿತ್ತು ....!!
ನೀ ನನ್ನ  ಹೃದಯದಲ್ಲಿ  ಮಾತ್ರವಲ್ಲ  ನೀ ನನ್ನೊಳಗೆ  ಸೇರಿರುವೆ....!!
ನನ್ನ  ಪ್ರತಿ  ನೋಟದೊಳಗೆ  ನೀ  ಅವಿತಿರುವೆ
ನಿ ನನ್ನ  ಪ್ರತಿ  ಉಸಿರಿನಲಿ  ಬೆರೆತಿರುವೆ....!!!
ನಾ  ಇಡುವ  ಪ್ರತಿ  ಹೆಜ್ಜೆಯಾ ಪಕ್ಕದಲಿ  ನೀನ್ನ  ಹೆಜ್ಜೆಯಾ  ನಾ  ಕಾಣುವೆ....!!

ನೀ  ಯಾರೆಲೇ  ಎಲ್ಲಿರುವೆಯೇ....??

ಗೂಳೂರು  ಚಂದ್ರು

ಶುಕ್ರವಾರ, ಜನವರಿ 24, 2014

ಮನದ ಮಾತು

ನನ್ನ  ಉಸಿರಲಿ  ನಿನ್ನ  ಉಸಿರು ಬೆರೆತುಹೋಗಿದೆ....!!
ನಿನ್ನ  ಕಣ್ಣಲಿ  ನನ್ನ  ಬಿಂಬ  ಕಾಣಿಸುತ್ತಾ  ಇದೆ....!!
ನನ್ನ  ಒಳಧ್ವನಿ  ನಿನ್ನ  ಹೆಸರನ್ನೆ  ಗುಣುಗುತಿದೆ....!!
ನಾ  ಎಲ್ಲೆ  ನೋಡಿದರು  ನಿನ್ನ  ನಗುಮುಖವೆ  ಕಾಣಿಸುತ್ತದೆ....!!
ನನ್ನ  ಕಿವಿಯಲ್ಲಿ  ನಿನ್ನ  ಮಾತುಗಳೆ  ಕೇಳುಸುತ್ತಿವೆ....!!


ಗೂಳೂರು ಚಂದ್ರು...

ಭಾನುವಾರ, ಜನವರಿ 12, 2014

ಕಾಣದ ಕನಸು , ನೋಡದ ನೋಟ

ಕಾಣದವರ  ಕನಸು ......
ನೋಡದವರ  ನೋಟ....


ಕಣ್ಣಿಗೆ  ಕಾಣುವುದು  ಕನಸು  ಮಾತ್ರ
ಮನಸ್ಸು  ನೋಡುವುದು  ಮನಸ್ಸನ್ನು  ಮಾತ್ರ....

ಗೂಳೂರು  ಚಂದ್ರು

ಭಾನುವಾರ, ಜನವರಿ 5, 2014

ಅವಳ ನಗು

ಅವಳ  ನಗು  ಎಲ್ಲ  ನೋವುಗಳನ್ನ  ಮರೆಸುವಂತಿತ್ತು .....
ಮನಸಿನ  ಹಳೆಯ  ಗಾಯಗಳಿಗೆ  ಮದ್ದೆ  ಇಲ್ಲದೆ  ಕೊರಗುತ್ತಿದ್ದ  ಮನಸಿಗೆ  ದೊಡ್ಡ  ಗಾತ್ರದ  ಅಮೃತ  ಸಿಕ್ಕಿದಂತಾಗಿತ್ತು ....
ಅಳುತ್ತಿದ್ದ  ಕಣ್ಣುಗಳು ಕೂಡ  ಅವಳ  ನಗುವನ್ನು ನೋಡಿ  ತನ್ನ  ಕಣ್ಣಿರನ್ನ ಒಳಗೆ  ಇಂಗಿಸಿಕೊಳ್ಳತ್ತಿತ್ತು ....
ಅವಳ  ನಗುವನ್ನು  ನೋಡಲು  ಮನಸ್ಸು  ತಡವರಿಸುತ್ತಿತ್ತು....
ಕಣ್ಣುಗಳು ಕಾಯುತ್ತಿದ್ದವು ...
ಅವಳ ಮುಖಕ್ಕೆ ನಗುವೆ  ಬಂಗಾರ  ನಗುವೆ  ಸಿಂಗಾರ....
.

ಗೂಳೂರು  ಚಂದ್ರು

ಬುಧವಾರ, ಜನವರಿ 1, 2014

ಸ್ವಾಗತ

ಸ್ವಾಗತ  ಸುಸ್ವಾಗತ .. ನೀನ್ನ ಬರುವಿಕೆಗೆ ...
ಹೊಸ ಕನಸುಗಳು , ಹೊಸ ಯೋಜನೆಗಳು, ಹೊಸ ಕಲ್ಪನೆಗಳು,

ನೀನು ತರುತ್ತಿರುವೆ ಸ್ವಾಗತ  ನೀನಗೆ ಸುಸ್ವಾಗತ...


ಗೂಳೂರು ಚಂದ್ರು


ಮಂಗಳವಾರ, ಡಿಸೆಂಬರ್ 31, 2013

ವಿದಾಯ

ನಾ ನೀಲ್ಲಿಸಿದರೂ ನೀ ನೀಲ್ಲಲಾರೆ .. ನಾ  ಎಷ್ಟೆ ಗೊಗೆರೆದರೂ ನೀನೀಲ್ಲಲಾರೆ .....
ನೀಲ್ಲುವ ಪರಿಸ್ಥತಿಯಲ್ಲಿ  ನೀನಿಲ್ಲ...ಅದನ್ನು  ನಾನು  ಅರ್ಥಮಾಡಿಕೊಳ್ಳಬಲ್ಲೆನು ....

ಆದರೆ ನೀನ್ನ  ಬಳಿ ಒಂದು  ಮಾತು ಹೇಳಬೇಕಿದೆ .....

ಇಂದು ಅದೇಷ್ಟು ಜನ  ನೀನ್ನನು  ಹೊಗಳುತ್ತಿದ್ದಾರೊ....ಅದೇಷ್ಟು  ಜನ  ನೀನ್ನನು ಉಗಿಯುತ್ತಿದ್ದಾರೊ.... ನಾ ಕಾಣೆ
ಅದೇಷ್ಟು  ಜನರಿಗೆ ನೀನು  ಬೇಸರ  ಮಾಡಿರುವೆಯೊ..
ಅದೇಷ್ಟು ಜನರಿಗೆ ನೀನು  ಸಂತೂಷ ಮಾಡಿರುವೆಯೊ....
ಯಾರಿಗೆ  ಇಷ್ಟವಾಗಿದೆಯೊ ...
ಯಾರಿಗೆ ಕಷ್ಟವಾಗಿದೆಯೊ....
ನೀನಗೆ ಗೊತ್ತು...
ಒಟ್ಟಾರೆ ಜೀವನ  ಒಂದು  ಇಷ್ಟ-ಕಷ್ಟಗಳ ಸರಮಾಲೆ ...
ಇವೆರಡನ್ನು  ನೀನು  ಎಲ್ಲರಿಗೂ ಕೊಟ್ಟಿರುವೆ ಎಂದು ಬಾವಿಸುತ್ತಾ ...
ನೀನ್ನನು ಬಿಳ್ಕೊಡುತ್ತಿದ್ದೆನೆ  .... GUd Bye ..
.
.
.
.
.
ಗೂಳೂರು ಚಂದ್ರು

ಶನಿವಾರ, ಡಿಸೆಂಬರ್ 28, 2013

ಕನಸಿಗಾಗೀ

ಕನಸಿಗಾಗಿ ಕಾದಿದೆ ಮನಸ್ಸು  ಮನಸಿಗಾಗಿ ಬರುವುದೇ  ಆ ಕನಸು ....??

ಕನಸು  ಕಾದಿದೆ ಚಂದ್ರನಿಗಾಗಿ
ಆ ಚಂದಿರ ಬೇಗ  ಬರವನೇ ಕನಸಿಗಾಗಿ ...??

ಚಂದಿರ  ಕಾದಿರುವನು  ಸೂರ್ಯ ನಿಗಾಗಿ
ಚಂದಿರನಿಗಾಗಿ ಆ  ಸೂರ್ಯ ಬೇಗ ಮುಳುಗುವನೇ....??
.
.
.
.
.
ಗೂಳೂರು ಚಂದ್ರು